ವಿಜಯಪುರ: ಕಳ್ಳರು ಸರಣಿ ಅಂಗಡಿ, ಮನೆಗಳ್ಳತನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ನಡೆದಿದೆ.
ನಿಡೋಣಿ ಗ್ರಾಮದ ಲಕ್ಷೀಂಬಾಯಿ ಅಂಗಡಗೆರಿ 1 ಲಕ್ಷ 20 ಸಾವಿರ ನಗದು, 6 ತೊಲಿ ಚಿನ್ನ , ಪಾರವ್ವ ಬಬಲೇಶ್ವರ ಅವರ 25 ಸಾವಿರ ನಗದು 4.5 ತೊಲಿ ಚಿನ್ನ, ಚಿಮ್ಮಡ ಅವರಿಗೆ ಸೇರಿದ 5 ತೊಲಿ ಚಿನ್ನ, 75 ಸಾವಿರ ನಗದು, ಮದರಸಾ ಎಂಬುವವರಿಗೆ ಸೇರಿದ 10 ತೊಲಿ ಬೆಳ್ಳಿ ದೋಚಿದ ಕಳ್ಳರು ಪರಾರಿಯಾಗಿದ್ದಾರೆ. ಇನ್ನು ಬೈರವನಾಥ ಮೆಡಿಕಲ್ ಅಂಗಡಿ ಮುಂದಿದ್ದ 2 ದ್ವಿ-ಚಕ್ರ ವಾಹನ ಕದ್ದೊಯ್ದ ಕಳ್ಳರು ಕಾಲ್ಕಿತ್ತಿದ್ದಾರೆ. ಇನ್ನು 6 ಜನ ಯುವಕರ ತಂಡದಿಂದ ಕಳ್ಳರ ಚಲನವಲನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.