ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಎಂದು ವಿಜಯಪುರದಲ್ಲಿ ಸಿದ್ಧರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದರು.
ನಗರದಲ್ಲಿ ಬಿಡಿಎ ಸಭೆ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನ ಪ್ರವೇಶದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿದೆ. ದೇವಸ್ಥಾನಕ್ಕೆ ಹೋಗುವಾಗ ಧರ್ಮಪಾಲನೆ ಮಾಡಬೇಕು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕು.
ದೇಗುಲದ ನಿಯಮ ಪಾಲನೆ ಪ್ರತಿ ನಾಗರಿಕನ ಕರ್ತವ್ಯ ಆಗಿದೆ. ಇನ್ನು ಸಿದ್ದರಾಮಯ್ಯ ಉದ್ದಟತನ ಮಾಡ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.