K1N ಡೆಸ್ಕ್: ನಟ ಸಲ್ಮಾನ್ ಖಾನ್ಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಇದು ಖಾನ್ ಕುಟುಂಬಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲಿಂದ ಆತಂಕದ ವಾತಾವಾರಣ ನಿರ್ಮಾಣ ಆಗಿತ್ತು.
ಈ ಕಾರಣಕ್ಕೆ ಸಲ್ಮಾನ್ ಖಾನ್ ಪ್ರಾಣ ರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡುವಂತೆ ಮುಂಬೈ ಕಮಿಷನರ್ ಆಫೀಸ್ನಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಸಲ್ಮಾನ್ ಖಾನ್ಗೆ ಗನ್ ಲೈಸೆನ್ಸ್ ಕೂಡ ಮಂಜೂರು ಮಾಡಲಾಗಿತ್ತು.
ಗನ್ ಲೈಸೆನ್ಸ್ ಪಡೆದ ಬಳಿಕವೇ ನಟ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರನ್ನು ಕೂಡ ಖರೀದಿ ಮಾಡಿದ್ದಾರೆ. ಇದೇ ಕಾರ್ನಲ್ಲಿ ಮುಂಬೈ ಏರ್ಪೋರ್ಟ್ಗೆ ಆಗಮಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬುಲೆಟ್ ಪ್ರೂಫ್ ಕಾರಿನ ವಿಶೇಷತೆ ಹಾಗೂ ಅದರ ಬೆಲೆಯ ಬಗ್ಗೆನೇ ಚರ್ಚೆಯಾಗುತ್ತಿದೆ.