ವಿಜಯಪುರ: ಸ್ನೇಹಿತರ ಜೊತೆಗೆ ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಅಸುನೀಗಿರುವ ಘಟನೆ ವಿಜಯಪುರ ತಾಲ್ಲೂಕಿನ ಮಖಣಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ. ರಾಜಶೇಖರ 37 ಮೃತಪಟ್ಟಿರುವ ದುರ್ದೈವಿ. ಸೆಕೆ ಹಿನ್ನಲೆ ಮಖಣಾಪುರ ಗ್ರಾಮದಲ್ಲಿನ ಕೆರೆಯಲ್ಲಿ ಈಜಲು ಹೋಗಿದ್ದರು. ಕೆರೆಯಲ್ಲಿ ಈಜಲು ಹೋದಾಗ ಅಸುನೀಗಿದ್ದಾರೆ. ಅದಕ್ಕಾಗಿ ಇದನ್ನು ತನಿಖೆ ಮಾಡಬೇಕು ಎಂದು ಮೃತ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.