ವಿಜಯಪುರ: ಹಣ(Money) ಹಾಗೂ ಹುಡುಗಿ(Girl) ವಿಷಯಕ್ಕಾಗಿ ಓರ್ವನ ಹತ್ಯೆಗೈದಿದ್ದ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರ ನಗರದಲ್ಲಿ ಎಸ್ಪಿ ಋಷಿಕೇಶ್ ಸೋನವಾಣೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಸಾಹಿಲ್ ಭಾಂಗಿಯನ್ನು ಐವರು ಹಣ ಹಾಗೂ ಹುಡುಗಿ ವಿಷಯಕ್ಕೆ ಹತ್ಯೆ(Murder) ಮಾಡಿದರು. ಸಮೀರ್ ಇನಾಮದಾರ್, ಮಹಮ್ಮದ್ಖೈಫ್ ಮುಲ್ಲಾ, ಇನಾಮದಾರ್, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಹಾಗೂ ತೌಪೀಕ್ ಇನಾಮದಾರ್ ಪರಾರಿಯಾಗಿದ್ದಾನೆ. ಕಳ್ಳತನ ಮಾಡುತ್ತಿದ್ದ ಹಣದಲ್ಲಿ ಹಂಚಿಕೊಳ್ಳುವ ವಿಷಯದಲ್ಲಿ ವೈಮನಸ್ಸು, ಮುಲ್ಲಾ ತಂಗಿಗೆ ಮೃತ ಸಾಹಿಲ್ ಕಿರುಕುಳ ನೀಡುತ್ತಿದ್ದನು. ಅಲ್ಲದೇ, ಕಳ್ಳತನದಲ್ಲಿ ಇಲ್ಲದೇ ಹೋದ್ರೂ ಬಿಲಾಲ್ ಹೆಸರು ಪ್ರಸ್ತಾಪ ಹಿನ್ನೆಲೆ ಕಲ್ಲಿನಿಂದ ಹತ್ಯೆಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.