ವಿಜಯಪುರ: ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜನೆ ನಡೆಸಿದ್ದು, ವಿಜಯಪುರ ನಗರದ ಮುರಾಣಕೆರಿಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು. ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ಮನೆಗಳನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯಿತು. ಮಹಾನಗರ ಪಾಲಿಕೆ ವತಿಯಿಂದ ಮನೆಗಳ ಮಾಲೀಕರಿಗೆ ನೋಟೀಸ್ ನೀಡಲಾಗುತ್ತಿತ್ತು. ಅದರಂತೆ ಮಾಲೀಕರು ಮನೆ ಖಾಲಿ ಮಾಡಿದ್ದರು. ಅದಕ್ಕಾಗಿ ಮನೆ ಕಟ್ಟಡಗಳನ್ನು ನೆಲಸಮ ಮಾಡಿದರು. ಈ ವೇಳೆ ಅಹಿತಕರ ಘಟನೆಗಳು ಆಗದಂತೆ ಗೋಳಗುಮ್ಮಟ್ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಅಭಿವೃದ್ಧಿ ಕಾಮಗಾರಿಗಳು ಹಿನ್ನೆಲೆ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಯಿತು.