K1N ಡೆಸ್ಕ್: ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ತಲೆ ಬಿಸಿ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದ್ರೇ,
ಕಪ್ಪು ದ್ರಾಕ್ಷಿ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳಿವೆ. ಅಲ್ಲದೇ, ಕಪ್ಪು ದ್ರಾಕ್ಷಿ (Black Grapes) 100 ಗ್ರಾಂ ದ್ರಾಕ್ಷಿಯಲ್ಲಿ 104 ಕ್ಯಾಲರಿ, 1.9 ಗ್ರಾಂ ಪ್ರೊಟೀನ್, 0.24 ಕೊಬ್ಬು, 1.4 ಗ್ರಾಂ ನಾರಿನಂಶ, 4.8 ಮಿಲಿಗ್ರಾಂ ವಿಟಮಿನ್ ಸಿ, 280 ಮಿಲಿಗ್ರಾಂ ಪೊಟಾಶಿಯಂ ಅಂಶವಿದೆ.
ಹೌದು..! ರಕ್ತದ ಕೊಬ್ಬಿನಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಚರ್ಮಕ್ಕೆ ಸೊಂಕು ಬರದಂತೆ ನೋಡಿಕೊಳ್ಳುತ್ತದೆ. ಕಪ್ಪುದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜ ಕರಗಿಸಲು ಸಹಾಯ ಮಾಡುತ್ತದೆ. ಇನ್ನೂ ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸಮಸ್ಯೆ ತಡೆಗಟ್ಟಿ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡುತ್ತದೆ. ಇನ್ನೂ ಮನೆಯಲ್ಲಿಯೇ ಒಂದು ಕಪ್ ಕಪ್ಪು ದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದ್ರೆ ರಕ್ತ ಹೆಚ್ಚಾಗುತ್ತದೆ. ಒಣ ದ್ರಾಕ್ಷಿ ಸೇವನೆಯಿಂದ ಮ್ಯಾನಿಕ್ ಆಸಿಡ್ ಹಲ್ಲುಗಳ ಬಣ್ಣ ಹಾಳಾಗುವುದು ನೈಸರ್ಗಿಕವಾಗಿ ತಡೆಗಟ್ಟುತ್ತದೆ. ಕಪ್ಪು ದ್ರಾಕ್ಷಿ ಸೇವಿಸಿ ಹಲವು ಪ್ರಯೋಗಗಳನ್ನು ಪಡೆಯಿರಿ.