ವಿಜಯಪುರ: ಅಕ್ರಮ ಅಂಗಡಿಗಳು ಹಾಗೂ ಮನೆಯ ಗೋಡೆಗಳ ತೆರವು ಕಾರ್ಯಾಚರಣೆ ವಿಜಯಪುರ ನಗರದ ನವಬಾಗ್ ರಸ್ತೆಯಲ್ಲಿ ನಡೆಯಿತು. ರಸ್ತೆ ಅಭಿವೃದ್ಧಿ ಹಿನ್ನೆಲೆ ಅಂಗಡಿಗಳು ಹಾಗೂ ಮನೆಯ ಗೋಡೆಗಳ ತೆರವು ಮಾಡಲಾಯಿತು. ಇನ್ನೂ ಮಹಾನಗರ ಪಾಲಿಕೆ ಆಯುಕ್ತ ಸೌದಾಗರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಈ ವೇಳೆ ಅಹಿತಕರ ಘಟನೆಗಳು ಆಗದಂತೆ ಗಾಂಧಿಚೌಕ್ ಪೊಲೀಸ ಠಾಣಾ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಲ್ಲದೇ, ಅಕ್ರಮವಾಗಿ ರಸ್ತೆಯ ಮೇಲೆ, ಮನೆ ಅಂಗಡಿಗಳನ್ನು ಕಟ್ಟಲಾಗಿತ್ತು. ಅದಕ್ಕಾಗಿ ಮನೆ, ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಮಾಡಿದರು.
![](https://karnataka1news.com/wp-content/uploads/2023/08/IMG_20230807_092746-1024x587.jpg)