ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಬಳಿಕ ಪ್ರಬಲ ಆಕಾಂಕ್ಷಿಗಳು ತಮ್ಮ ವಾರ್ಡ್ ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮಹಾನಗರ ಪಾಲಿಕೆ ವಾರ್ಡ್ ನಂ.31 ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುಚಿತ್ರಾ ಬಾಳು ಜಾಧವ ಈಗಾಗಲೇ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿ ಟಿಕೆಟ್ ನೀರಿಕ್ಷೆಯಲ್ಲಿರುವ ಸುಚಿತ್ರಾ ಜಾಧವ ಬಿ.ಕಾಂ.ಪದವೀಧರೆಯಾಗಿದ್ದು ಕನ್ನಡ, ಮರಾಠಿ ಇಂಗ್ಲಿಷ್, ಹಿಂದಿ ಪ್ರವಿಣೆಯಾಗಿದ್ದಾರೆ. ಇನ್ನೂ ತಮ್ಮ ಪ್ರಚಾರದ ಕುರಿತು ಮಾತನಾಡಿರುವ ಸುಚಿತ್ರಾ ಜಾಧವ ನಾನು ವಾರ್ಡ್ 31 ರಲ್ಲಿಯೇ ಹುಟ್ಟಿ ಬೆಳೆದ ಮನೆ ಮಗಳಾಗಿದ್ದು, ವಾರ್ಡನ ಸಮಸ್ಯೆಗಳ ಕುರಿತು ಸಂಪೂರ್ಣ ಜ್ಞಾನವಿದೆ. ರಸ್ತೆಗಳು ಹದಗೆಟ್ಟಿವೆ, ಒಳಚರಂಡಿ ವ್ಯವಸ್ಥೆಯಾಗಬೇಕಿದೆ.
ಕಸ ವಿಲೇವಾರಿಯಂತಹ ಸಮಸ್ಯೆಗಳನ್ನು ವಾರ್ಡ್ ಎದುರಿಸುತ್ತಿದೆ ಅಲ್ಲದೇ ತನಗೆ ಸಮಾಜಸೇವೆ ಮಾಡಬೇಕೆನ್ನುವ ಹಂಬಲ ಇದೆ, ದಯಮಾಡಿ ನನಗೆ ಬಿಜೆಪಿ ಟಿಕೆಟ್ ನೀಡಲಿ ಇಲ್ಲದ್ದಿದ್ದರೆ ನಾನು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.
ಇನ್ನೂ ವಾರ್ಡ್ನ ಮತದಾರರು ಸುಚಿತ್ರಾ ಜಾಧವಗೆ ಬೆಂಬಲ ಸೂಚಿಸಿದ್ದು ಬಿಜೆಪಿ ಪಕ್ಷವು ಒಬ್ಬ ಸಮರ್ಥ ಅಭ್ಯರ್ಥಿ ಕಳೆದುಕೊಳ್ಳದೇ ಟಿಕೆಟ್ ನೀಡಲಿ ಇಲ್ಲವಾದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರೂ ನಮ್ಮ ಬೆಂಬಲವಿದೆ ಎಂದು ಬೆಂಬಲ ಸೂಚಿಸುತ್ತಿದ್ದಾರೆ.