ವಿಜಯಪುರ : 2024-25ನೇ ಸಾಲಿನಲ್ಲಿ ಬಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ದಿನಾಂಕ: 06-01-2024 ರವರೆಗೆ ಅವಧಿಗೆ ವಿಸ್ತರಿಸಲಾಗಿದೆ. ಓಚಿಣioಟಿಚಿಟ ಛಿouಟಿಛಿiಟ ಜಿoಡಿ ಖಿeಚಿಛಿheಡಿ ಇಜuಛಿಚಿಣioಟಿ ಇಲ್ಲಿಯ ಮಾನ್ಯತೆ ಪಡೆದಿರುವ ಬಿ. ಎಡ್ ಸರ್ಕಾರಿ ಅರೆ ಸರ್ಕಾರಿ /ಖಾಸಗಿ ಕಾಲೇಜುಗಳಲಿ 2024-25ನೇ ಸಾಲಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರೀಸಿಯನ್, ಜೈನ್, ಸಿಖ್, ಬೌದ್ದ, ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ರೂ 25.000/ ಗಳ ವಿಶೇಷ ಪ್ರೋತ್ಸಾಹಧನ ಪ್ರತಿ ವರ್ಷ (ಗರಿಷ್ಟ ಎರಡು ವರ್ಷಕ್ಕೆ ಮಾತ್ರ) ನೀಡಲಾಗುವುದು. ವಿದ್ಯಾರ್ಥಿಗಳು ಸೇವಾಸಿಂದುವಿನ ಪೋರ್ಟಲ್ ನಲ್ಲಿ( hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ) ವೆಬ್ ಸೈಟ್ ಮೂಲಕ ಅಗತ್ಯ ದಾಖಲಾತಿ ಯೋಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪ ದಂಖ್ಯಾತ ಕಛೇರಿ (08352295523) ಹಾಗೂ ತಾಲೂಕು ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಗಳಾದ ವಿಜಯಪುರ (8123710766) ಬಸವನ ಬಾಗೇವಾಡಿಯ (9972340721) ಮುದ್ದೇಬಿಹಾಳ (8722445552) ಇಂಡಿ (9900109759) ಹಾಗೂ ಸಿಂದಗಿ (9035558609) ಸಂಪರ್ಕಿಸಬಹುದಾಗಿ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆ ತಿಳಿಸಿದೆ.