ವಿಜಯಪುರ: ಸಚಿವರಾಗಿ ಶಿವಾನಂದ ಪಾಟೀಲ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ವಿಜಯಪುರ ನಗರದ ಚಾಂದನಿ ಹೋಟೆಲ್ ಎದುರು ಶಿವಾನಂದ ಪಾಟೀಲ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರತಿಷ್ಠಿತ ಚಾಂದನಿ ಹೋಟೆಲ್ ಮಾಲೀಕ ಮೋಹಿನ್ ಕಲಾದಗಿ ನೇತೃತ್ವದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿದರು. ಅಲ್ಲದೇ, ಕಾಂಗ್ರೆಸ್ ಸರ್ಕಾರ, ಸಚಿವ ಶಿವಾನಂದ ಪಾಟೀಲ ಪರವಾಗಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಸಚಿವ ಶಿವಾನಂದ ಪಾಟೀಲ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.