ವಿಜಯಪುರ: ಕೆಎಸ್ ಈಶ್ವರಪ್ಪ ಮತ್ತೆ ಸಚಿವರಾಗಲಿ ಎಂದು ಕೆಎಸ್ ಈಶ್ವರಪ್ಪ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ವಿಜಯಪುರದ ಅರಕೇರಿ ಅಮೋಘ ಸಿದ್ದೇಶ್ವರ ದೇಗುಲದಲ್ಲಿ ರವಿವಾರ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಹೈ ಕಮಾಂಡ್ ಕೆಎಸ್ ಈಶ್ವರಪ್ಪಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಈಶ್ವರಪ್ಪ ಹಿಂದುತ್ವದ ಪ್ರಖರ ಪ್ರತಿಪಾದಕರು. ಹೀಗಾಗಿ ಮಂತ್ರಿ ಸ್ಥಾನ ನೀಡಿ ಎಂದು ಈಶ್ವರಪ್ಪ ಅಭಿಮಾನಿಗಳು ಹೇಳಿದರು.