ವಿಜಯಪುರ: ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಬಲಗರಿಂದ ವ್ಯಕ್ತಿಯ ಮೇಲೆ ಹಲ್ಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲು ರಸ್ತೆಯಲ್ಲಿ ನಡೆದಿದೆ.
ದೇವಕಾಂತ ಬಿಜ್ಜರಗಿ ಹಲ್ಲೆಗೊಳಗಾದ ವ್ಯಕ್ತಿ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 2ರಲ್ಲಿ ಬಿಜೆಪಿ ಅಭ್ಯರ್ಥಿ ರಾಹುಲ್ ಔರಂಗಾಬಾದ್ ಸೋಲು ಹಿನ್ನಲೆ ಇತನ ಬೆಂಬಲಿಗರು ದೇವಕಾಂತ ಮೇಲೆ ಹಲ್ಲೆಗೈದಿದ್ದಾರೆ. ಇದೀಗ್ ದೇವಕಾಂತ ಬಿಜ್ಜರಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಐದಾರು ಜನರು ಕಲ್ಲಿನಿಂದ ಹಲ್ಲೆಗೈದಿದ್ದಾರೆ ಎಂದು ಬಿಜ್ಜರಗಿ ಆರೋಪಿಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.