ಧಾರವಾಡ: ಸಾಲ ಬಾಧೆ ಭಯಕ್ಕೆ ತಂದೆ-ಮಗ ಇಬ್ಬರೂ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿವನಗೌಡ ನಿಂಗಪ್ಪ ಹೂಲಿಕಟ್ಟಿ (60) ಹಾಗೂ ಅನಿಲ್ ಶಿವನಗೌಡ ಹೂಲಿಕಟ್ಟಿ (30) ಮೃತಪಟ್ಟಿರುವ ದುರ್ದೈವಿ.
ಕುಂದಗೋಳ ಪಟ್ಟಣದ ನಿವಾಸಿಯಾದ ಮೃತರು. ಕಳೆದ ಮೂರ್ನಾಲ್ಕು ವರ್ಷಗಳಿಂದ ತಂದೆ ಶಿವನಗೌಡ ಹಾಗೂ ಮಗ ಅನಿಲ್ ಹೆಸರಿನಲ್ಲಿರುವ ಜಮೀನಿನ ಮೇಲೆ ಕೃಷಿ ಚಟುವಟಿಕೆ ಕೈಗೊಳ್ಳಲು ಖಾಸಗಿ ಬ್ಯಾಂಕ್, ಸಹಕಾರಿ ಸಂಘ ಸೇರಿ 9 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದರು. ಆದ್ರೇ, ಮಳೆ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ಪಟ್ಟಣದ ಹೊರ ವಲಯದ ಜಮೀನಿನಲ್ಲಿ ತಂದೆ ಮಗ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.