ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ನಗರದ ಜಲನಗರದಲ್ಲಿ ನಡೆದಿದೆ. ಜಲನಗರ ಬುದ್ದ ವಿಹಾರ ಕಾಂಪ್ಲೆಕ್ಸ್ ನಲ್ಲಿರೋ ಟೇಲರ್ ಶಾಪ್ ಭಸ್ಮವಾಗಿದೆ. ಅಲ್ಲದೇ,
ವಾಣಿಜ್ಯ ಸಂಕೀರ್ಣದಲ್ಲಿರೋ ಟೇಲರ್ ಶಾಪ್ ನಲ್ಲಿ ಬೆಂಕಿ ಹೊತ್ತಿ ಉರಿದಿದೆ.ಬೆಂಕಿ ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಆರಿಸುವಷ್ಟರಲ್ಲಿ ಟೇಲರ್ ಶಾಪ್ ನಲ್ಲಿದ್ದ ಬಟ್ಟೆ ಬರೆಗಳು ಸುಟ್ಟು ಕರಕಲು ಆಗಿದ್ದಾವೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.