ಮೈಸೂರು: ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ವಿಚಾರ ಹಿನ್ನೆಲೆ ಕೋವಿಡ್ ಸೋಂಕಿತ ಮಹಿಳೆ ಅಸುನೀಗಿದ್ದಾಳೆ. ಸಾಂಸ್ಕೃತಿಕ ನಗರಿಯಲ್ಲಿ ಕೋವಿಡ್ಗೆ ಮಹಿಳೆ ಬಲಿ ಆಗಿದ್ದಾಳೆ. ಮೈಸೂರು ನಗರದ 29 ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕ್ಷಯ ರೋಗ ಸೋಂಕಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಮಹಿಳೆ ಕೋವಿಡ್ ಸೋಂಕು ಧೃಡಪಟ್ಟಿತ್ತು. ಇನ್ನೂ ಕೋವಿಡ್ ಶಿಷ್ಟಾಚಾರದಂತೆ ಮಹಿಳೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.