ವಿಜಯಪುರ: ಆರ್ಎಸ್ಎಸ್ ಬ್ರಿಟಿಷ್ ಜೊತೆಗೆ ಸಾಮೀಲು ಆಗಿದ್ರು ಎಂದು ಆರ್ಎಸ್ಎಸ್ ವಿರುದ್ಧ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಮಾಡಿದರು. ವಿಜಯಪುರದಲ್ಲಿ ರವಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್, ಬಿಜೆಪಿ ಭಾಗಿ ಆಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದರು.
ಆದ್ರೇ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೇ ಆರ್ಎಸ್ಎಸ್,ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರೆಂದು ಬಿಂಬಿಸಿಕೊಳ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಬಿಜೆಪಿನವರು ದೇಶವನ್ನು ಛಿದ್ರ ಛಿದ್ರ ಮಾಡ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದು ಬುರಡೆ ಜನರ ಪಕ್ಷ ಎಂದು ಬಿಜೆಪಿ ಹೆಸರು ಬದಲಾಯಿಸಿಕೊಳ್ಳಬೇಕು. ಬಿಜೆಪಿನವರು ಸುಳ್ಳು ಹೇಳಿ ಜನರ ತಪ್ಪು ದಾರಿಗೆ ತರುತ್ತಿದ್ದಾರೆ. ಇದು ಬಹಳ ದಿನ ನಡೆಯೋದಿಲ್ಲ ಎಂದರು.
ಅಲ್ಲದೇ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ್ದು, ಸಹಜವಾಗಿ ಅವರು ನಮ್ಮ ರಾಜ್ಯದವರಾಗಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಖರ್ಗೆ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ ಸ್ಪರ್ಧಿಸುತ್ತಿದ್ದಾರೆ. ಖರ್ಗೆ ನಮ್ಮ ರಾಜ್ಯದವರೆ ಆಗಿದ್ದಾರೆ. ಹೀಗಾಗಿ ಅವರತ್ತ ಒಲವು ಜಾಸ್ತಿ ಇದೆ ಎಂದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಜೆ ಗಾಂಧಿ ಪರಿವಾರದವರು ಬಿಟ್ಟು ಬೇರೆ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಹ ಇದನ್ನೇ ಪ್ರತಿಪಾದಿಸಿದ್ದರು. ಗಾಂಧಿ ಕುಟುಂಬ ಬಿಟ್ಟು ಬೇರೆ ನಾಯಕರಿಗೆ ಕಾಂಗ್ರೆಸ್ ಸರ್ವೋಚ್ಚ ಸ್ಥಾನ ನೀಡಬೇಕು ಎಂದು ಬಯಸಿದ್ದರೆ. ಅದಕ್ಕೆ ತಕ್ಕಂತೆ ಈಗ ಕಾಲ ಕೂಡಿ ಬಂದಿದೆ ಎಂದರು.