K1N ಡೆಸ್ಕ್: ಜಿಂಬಾಂಬ್ವೆಯ ಮಾಜಿ ಕ್ರಿಕೆಟಿಗ ಹಾಗೂ ದಿಗ್ಗಜ ಹೀತ್ ಸ್ಟ್ರೀಕ್ ಕ್ಯಾನ್ಸರ್ ನಿಂದ ಅಸುನೀಗಿದ್ದಾರೆ. ಇನ್ನು ಹೀತ್ ದೀರ್ಘಕಾಲದ ಹೋರಾಟದ ನಂತರ ಮೃತಪಟ್ಟಿದ್ದಾರೆ. 49 ವರ್ಷದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಂಬಾಬ್ವೆ ಕ್ರಿಕೆಟ್ನ ಮಾಜಿ ವೇಗದ ಬೌಲರ್ ಮತ್ತು ಬ್ಯಾಟಿಂಗ್ನಲ್ಲೂ ಮಿಂಚಿದರು. ಇನ್ನು ಜಿಂಬಾಬ್ವೆ ನಾಯಕ ಸೀನ್ ಎರ್ವಿನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಂತಾಪ ಸೂಚಿಸಿದ್ದಾರೆ. ಆದಾಗ್ಯೂ, ಸ್ಟ್ರೀಕ್ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.