ವಿಜಯಪುರ: ಹೈವೇ ಪಕ್ಕ ನಿಂತವರ ಮೇಲೆ ಅಪರಿಚಿತ ಲಾರಿ ಹರಿದು ಹೋಗಿರುವ ಪರಿಣಾಮ ಸ್ಥಳದಲ್ಲೆ ನಾಲ್ವರು ಬೈಕ್ ಸವಾರರ ಅಸುನೀಗಿರುವ ಘಟನೆ ವಿಜಯಪುರ ನಗರದ ಹಿಟ್ನಳ್ಳಿ ಟೋಲ್ ನಾಕಾ ಬಳಿ ನಡೆದಿದೆ. ಊಟಕ್ಕೆ ಹೋಗಿದ್ದ ಯುವಕರು ಮೃತಪಟ್ಟಿದ್ದಾರೆ. ಬೈಕ್ ಸಮೇತ ಹೈವೇ ಪಕ್ಕ ಬದಿಗೆ ನಿಂತಾಗ ಯುವಕರ ಮೇಲೆ ಲಾರಿ ಹರಿದಿದೆ. ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳ ಸಂಚಾರಿ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಯುವಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.