ವಿಜಯಪುರ, : ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಅಯುರ್ವೇದ ಮಹಾವಿದ್ಯಾಲಯದಲ್ಲಿ ನಾಳೆ ಜನೇವರಿ 7 ರಿಂದ ಮಾರ್ಚ್ 7ರ ವರೆಗೆ ಎರಡು ತಿಂಗಳ ಕಾಲ ಕಿಡ್ನಿ ಫೆಲ್ಯುರ್ (Chronic Kidney Disease) ಮತ್ತು ಕಿಡ್ನಿಗೆ ಸಂಭದಿಸಿದ ಇತರೆ ರೋಗಗಳಿಗೆ ವಿಶೇಷವಾಗಿ ಹೆಚ್ಚಿನ ಕ್ರೀಯಾಟೆನಿನ್ ಹೋಂದಿರುವ ರೋಗಿಗಳಿಗೆ ವಿಶೇಷ ಸಲಹೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಕಿಡ್ನಿ ಸಂಬಂಧಿತ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಈ ಉಚಿತ ಶಿಬಿರದ ಸದುಪಯೊಗವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಪೂರ್ವ ನೋಂದಣಿಗಾಗಿ ಡಾ. ಆಶ್ವಿನಿ ಸಜ್ಜನವರ- ಮೊಬೈಲ್ ನಂ. 7406737888 ಮತ್ತು 8073853981 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.