ವಿಜಯಪುರ: ಈ ವರ್ಷ ವಿಜಯಪುರ ಜಿಲ್ಲೆಯಲ್ಲಿ ಸೂರ್ಯ ನಿಗಿನಿಗಿ ಕೆಂಡಕಾರಿದ್ದಾನೆ. ಹೀಗಾಗಿ ತಂಪು ಪಾನೀಯಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಬಿಸಿಲಿನಿಂದ ಕಂಗೆಟ್ಟ ಮದ್ಯಪ್ರೀಯರು ವಿಸ್ಕಿಗಿಂತ ತಂಪು ತಂಪಾದ ಬೀಯರ್ ಸೇವಿಸಿದ ಪರಿಣಾಮ ವಿಸ್ಕಿಗಿಂತ ಬಿಯರ್ ಸೇವಿಸಿದರ ಪರಿಣಾಮವಾಗಿ ಜಿಲ್ಲೆಯಲ್ಲಿ ಈ ವರ್ಷ ವಿಸ್ಕಿಗಿಂತ ಬೀಯರ್ ಅತ್ಯಧಿಕ ದಾಖಲೆ ಪ್ರಮಾಣದ ಮಾರಾಟವಾಗಿದೆ. ಹೀಗಂತ ನಾವು ಹೇಳ್ತಿಲ್ಲಾ. ಅಬಕಾರಿ ಇಲಾಖೆಯ ಅಂಕೆ ಅಂಶಗಳು ಹೇಳ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ 2023 ಮಾರ್ಚ್ ತಿಂಗಳಲ್ಲಿ 73,374 ಬಾಕ್ಸ್ಕ್ಸ್ ಮಾರಾಟವಾಗಿದ್ರೆ, ಏಪ್ರಿಲ್ ತಿಂಗಳಲ್ಲಿ 70,443 ಬಾಕ್ಸ್, ಮೇ ತಿಂಗಳಲ್ಲಿ 24,865 ಬಾಕ್ಸ್ ಮಾರಾಟವಾಗಿದ್ದವು. 2024 ಮಾರ್ಚ್ ತಿಂಗಳಲ್ಲಿ 84,294 ಬಾಕ್ಸ್, ಏಪ್ರಿಲ್ ತಿಂಗಳಲ್ಲಿ 88,265 ಬಾಕ್ಸ್, ಮೇ 17ವರೆಗೆ 45,616 ಬಾಕ್ಸ್ ಮಾರಾಟವಾಗುವ ಮೂಲಕ ದಾಖಲೆ ಪ್ರಮಾಣದಲ್ಲಿ ಬೀಯರ್ ಸೇಲ್ ಆಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ತಿಳಿಸಿದ್ದಾರೆ. ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿಸ್ಕಿ ಪ್ರೀಯರಿಗಿಂತ ಬೀಯರ್ ಪ್ರೇಮಿಗಳು ಹೆಚ್ಚಾಗಿದ್ದು ಬಿಸಿಲಿನ ಎಫೆಕ್ಟ್ ಎನ್ನುವಂತಾಗಿದೆ.