ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ ಸಪ್ತಾಹ*

Karnataka 1 News
ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ ಸಪ್ತಾಹ*

 

*ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ ಸಪ್ತಾಹ*

ಶ್ರೀ ಸ.ಸ. ಗಣಪತರಾವ ಮಹಾರಾಜರ ೧೧೭ನೇ ಜಯಂತ್ಯೋತ್ಸವ

ದಿ: ೨೧ ರಿಂದ ೨೭ ಆಗಸ್ಟವರೆಗೆ ಶಾಂತಿಕುಟೀರ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಜ್ಞಾನಯಜ್ಞರೂಪವಾಗಿ
ನೆರೆವೇರಿತು. ಉತ್ಸಾಹದಿಂದ ಕರ್ನಾಟಕ, ಮಹಾರಾಷ್ಟ್ರ,ಉತ್ತರ ಪ್ರದೇಶ, ಆಂಧ್ರ, ಅಮೇರಿಕ ಮುಂತಾದ ವಿವಿಧ ಗ್ರಾಮ, ಶಹರ, ಪಟ್ಟಣ,
ಸ್ಥಳಗಳಿಂದ ಭಕ್ತರ ಸಾಗರ ಹರಿದು ಬಂದಿತ್ತು. ಏಳೂ ದಿನಗಳು ಬೆಳಿಗ್ಗೆ ೫ ಗಂಟೆಗೆ
ಕಾಕಡಾರತಿಯಿಂದ
ಪ್ರಾರಂಭವಾದ ಕಾರ್ಯಕ್ರಮದಲ್ಲಿ ದಿನನಿತ್ಯ ಶ್ರೀ ಸ.ಸ. ಗಣಪತರಾವ ಮಹಾರಾಜರ ಧ್ವನಿಮುದ್ರಿತ ಪ್ರವಚನ, ನಂತರ ಮೊದಲನೆ ಸತ್ರದಲ್ಲಿ ಪೂಜ್ಯರ, ಗಣ್ಯರ, ವಿದ್ವಾಂಸರಿಂದ ಪ್ರವಚನ, ಆರತಿ, ಭಜನೆ, ಮಹಾಪ್ರಸಾದ ಸಾಯಂಕಾಲ ೫ ಗಂಟೆಗೆ ಸುಲಭ ಆತ್ಮಜ್ಞಾನ ಗ್ರಂಥವಾಚನ ಆಮೇಲೆ ಮರಾಠಿ ಹಾಗೂ ಕನ್ನಡದಲ್ಲಿ ಹೀಗೆ ಸಂತರ ಪ್ರವಚನಗಳು
ಮೂಡಿಬಂದವು.

ಸಾಂಸ್ಕೃತಿಕ ಕಾರ್ಯಕ್ರಮದಡಿಯಲ್ಲಿ ಕೀರ್ತನೆ, ಹರಿಕಥೆ ಭಕ್ತಿ ಸಂಗೀತ, ಭಾರೂಡ ಮುಂ.
ನಡೆದವು, “ಪರಮಾಮೃತ ಭೋಧ” ಎಂಬ ಶ್ರೀ ಸ.ಸ. ಗಣಪತರಾವ ಮಹಾರಾಜರ ಆಯ್ದ ಪ್ರವಚನಗಳ ಗ್ರಂಥ ಲೋಕಾರ್ಪಣೆ ಆಯಿತು. ಶಾಂತಿಕುಟೀರ ಆ್ಯಪ್ ನೂತನ ಆವೃತ್ತಿ ಅನಾವರಣಗೊಂಡಿತು. ಕಳೆದ ೪೮ ವರ್ಷಗಳಿಂದ ಸಾಗಿಬಂದ ಶಾಂತಿಕುಟೀರ ಸಂಪ್ರದಾಯದ ಮುಖಪತ್ರ ಶಾಂತಿ ಕುಟೀರ ಸಂದೇಶ ತ್ರೈಮಾಸಿಕದ ಗಣೇಶ ಚತುರ್ಥಿ ಸಂಚಿಕೆಯು ಮರಾಠಿ ಮತ್ತು ಕನ್ನಡದಲ್ಲಿ ಬಿಡುಗಡೆ ಆಯಿತು.

ಈ ಸಪ್ತಾಹದಲ್ಲಿ ಪ್ರವಚನಕಾರರಾಗಿ ಪರಮ ಪೂಜ್ಯರಾದ ಸರ್ವಶ್ರೀ ಬಸವಲಿಂಗ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ, ವಿಜಯಪುರ, ಅಭಿನವ ಸಿದ್ಧರೂಢ ಸ್ವಾಮಿಗಳು, ಷಣ್ಮುಖಾರೂಢ ಮಠ, ವಿಜಯಪುರ,ಸಂಗಮೇಶ ಶ್ರೀಗಳು ವಿಜಯಪುರ, ಚಿದ್ರುಪಾನಂದ ಸರಸ್ವತಿ ಸ್ವಾಮಿಜೀ, ದಯಾನಂದ ಗುರುಕುಲ ಹುಬ್ಬಳ್ಳಿ, ದೀಪಕ (ನಾನಾ) ಕೇಳಕರ, ಮುರಳಿ ಭೈಯ್ಯಾ ಜಾಜು, ಡಾ. ಸುಜಾತಾ ಕಾನಿಟಕರ, ಪುಣೆ ಅಲಕಾತಾಯಿ ಮುತಾಲಿಕ, ಡೊಂಬಿವಲಿ, ಮಹಾಂತೇಶ ಸ್ವಾಮಿಗಳು ತದ್ದೆವಾಡಿ, ಶಂಕರ ಶಾಸ್ತ್ರಿಗಳು, ಕೌಸ್ತುಭ ಬುವಾ ರಾಮದಾಸಿ, ಮಿರಜ್, ಡಾ. ತೇಜಸ್ವೀನಿ ಅನಂತಕುಮಾರ, ವಿವೇಕ ಸಬನೀಸ, ಸ್ವಾಮಿ ಆದಿತ್ಯಾನಂದ ಸರಸ್ವತಿ, ಚಿನ್ಮಯ ಮಿಶನ್, ಮಂಡ್ಯಾ, ವಿಜಯಾತಾಯಿ ಗಾಯಕವಾಡ, ಪುಣೆ,ಸ್ವಾಮಿ ಕೃತಾತ್ಮಾನಂದಜೀ, ಚಿನ್ಮಯ ಮಿಶನ್, ಹುಬ್ಬಳ್ಳಿ, ಪದ್ಮಶ್ರೀ ಡಾ. ವಿಜಯಲಕ್ಷ್ಮೀ ದೇಶಮಾನೆ, ಪ್ರಸನ್ನ ಬಾಪು ದೀಕ್ಷಿತ ಮುಂತಾದವರ ಪ್ರವಚನಗಳು ಸಪ್ತಾಹದ ಸಮಯದಲ್ಲಿ ಜರುಗಿದವು.

ಕರ್ನಾಟಕ ಕಲಾಶ್ರೀ ಮೋಹನ ಕುಮಾರ ತುಮಕೂರು ಇವರ ಹರಿಕಥೆ, ಸೌ. ರಶ್ಮಿ ಬರ್ವೆ;ಅಮೇರಿಕ ಅವರ ಕೀರ್ತನೆ, ಕುಮಾರ ಋಗ್ವೇದ ನಿತಿನ ಬರ್ವೆ , ಶ್ರೀಮತಿ ಮುಗ್ಧಾ ಪ್ರಧಾನ ಹಾಗೂ ಸೌ. ಶೃತಿ ಕಡಗಾಂವಕರ ಅವರ ಭಕ್ತಿ ಸಂಗೀತ, ರಾಮರಾಜ್ಯ ಕಲಾಮೇಳ, ಶಾಂತಿಕುಟೀರ ಕನ್ನೂರ ಇವರ ಭಾರೂಢ, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಡೂರು ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ರೋಹಿದಾಸ ಮಹಾರಾಜ ಹಂಡೆ, ಡಾ. ಜ್ಞಾನೇಶ್ವರ ವಾರಂಗ ಶ್ರೀ ನಿರಂಜನ ಮೂರ್ತಿ ಸೌ. ಅಕ್ಷ್ಮೀ ಕುಲಕರ್ಣಿ ಮುಂತಾದವರಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೊನೆಯದಿನ ಕನ್ನೂರ ಗ್ರಾಮದಲ್ಲಿರುವ ಶ್ರೀ ಸಮರ್ಥ ಸದ್ಗುರುಗಳ ಜನ್ಮಸ್ಥಾನದಿಂದ ಶಾಂತಿಕುಟೀರದವರೆಗೆ ಸಕಲ ವಾಧ್ಯ ಪರಿಕರದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಮೆರವಣಿಗೆ ಹಾಗೂ ಪೂಜ್ಯರ ಪ್ರವಚನದೊಂದಿಗೆ ದಾಸಬೋಧ ಗ್ರಂಥ ವಾಚನ ಸಮಾಪ್ತಿ, ಪುಷ್ಪವೃಷ್ಟಿ ಹಾಗೂ ಮಹಾಪ್ರಸಾದದೊಂದಿಗೆ ಸಪ್ತಾಹ ಸಮಾಪ್ತಿ ಆಯಿತು. ಎಲ್ಲಾ ಭಕ್ತರಿಗೂ ಉಳಿದುಕೊಳ್ಳುವ ಹಾಗೂ ವಿಶ್ರಾಂತಿ, ಊಟೋಪಚಾರ ವ್ಯವಸ್ಥೆ ಶಾಂತಿಕುಟೀರ ಟ್ರಸ್ಟಿನ ಸಾರಥ್ಯದಲ್ಲಿ ನಡೆಯಿತು. ಕೆಲ ಸೇವಾಧಾರಿಗಳು
ಬೆಳಿಗ್ಗೆ 3:00ಗಂಟೆಗೆ ಎದ್ದು ಎಲ್ಲರಿಗಾಗಿ ಸ್ನಾನಕೆ ನೀರು ಕಾಯಿಸುತ್ತಿದ್ದರು, ಆಶ್ರಮದ ಪ್ರಾಂಗಣದಲ್ಲಿ ಶ್ರೀಮದಾನ ಆಚರಿಸುತ್ತಿದ್ದರು.
ಕಾಕಡಾರತಿಯಿಂದ ರಾತ್ರೀ ಭಜನೆ ವರೆಗೆ ಮೈಕ್ ನಿರ್ವಹಿಸುವ ಶ್ರೀ ಮುದಕಪ್ಪ, ಮುಂದಿನ ಪೀಳಿಗೆಗೆ ಅನುಕೂಲ ಆಗುವ ಹಾಗೆ ಮಕ್ಕಳಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಿದ ಫಡ್ನವೀಸ್,
ಸತತ ಎಲ್ಲಾ ಕಾರ್ಯಕ್ರಮಗಳನ್ನು youtube ಮುಖಾಂತರ Live ಕಳಿಸುವ ಸಾಧನಾಳ ಸಾಧನೆ,
ಹೊಸ ಕಾರ್ಯಕ್ರಮ know your ಸಂಪ್ರದಾಯ, ಮೂಡಿ ಬಂದಿದ್ದು,
ಅಲ್ಲದೇ ಆಶ್ರಮದ ಅಡುಗೆ ಮನೆಗೆ ವಿಶ್ರಾಂತಿ ನೀಡುವ, ಕ್ಯಾಂಟಿನ್ ಮುಂಬೈ ಭಕ್ತ ಮಂಡಳಿಯ ಅವಿಶ್ರಾಂತ ಸೇವೆಯಿಂದ ಸಾಧ್ಯವಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರು, ಟ್ರಸ್ಟ್ ಕಮಿಟಿಯ ಸದಸ್ಯರು, ಸದ್ಗುರು ಸೇವಾ ಸಮಿತಿ, ಅಧ್ಯಾತ್ಮ ಭಾಂಡಾರ, ಭಾರತೀಯ ಸುರಾಜ್ಯ ಸಂಸ್ಥೆ, ರಾಮರಾಜ್ಯ ಕಲಾಮೇಳ ಎಲ್ಲಾ ಊರಿನ ಸತ್ಸಂಗ ಮಂಡಳಿಗಳು ಹಾಗೂ ಸ.ಸ. ಶ್ರೀ ಗಣಪತರಾವ ಮಹಾರಾಜರ ಸಮಸ್ತ ಭಕ್ತವೃಂದ ಶಿಸ್ತು ಸಂಯಮದಿಂದ ಪಾಲ್ಗೊಂಡಿದ್ದರು.ಗುರು ಮನೆತನದ ಶ್ರೀ ರಮೇಶ ಕನ್ನೂರ, ಟ್ರಸ್ಟ್ ಅಧ್ಯಕ್ಷರಾದ ಶ್ರೀ ಗೋವಿಂದಲಾಲ ಬಾಹೇತಿ ಉಪಸ್ಥಿತರಿದ್ದರು, ಉಪಾಧ್ಯಕ್ಷ ಶ್ರೀ ರವಿ ದಾನಿ ಪ್ರಾಸ್ತಾವಿಕ ನುಡಿ ಹೇಳಿದರು.ಶ್ರೀ ಶ್ರೀಕೃಷ್ಣ ಸಂಪಗಾಂವಕರ ಸೂತ್ರ ಸಂಚಾಲನೆ ಮಾಡಿದರು. ಶ್ರೀ ಅರುಣ ಸೋಲಾಪುರಕರ, ಶ್ರೀ ಸಂಜಯ ತಿಕೋಟಿ, ಶ್ರೀ ಅಜೀತ ಕನ್ನೂರ ಸೇರಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";