ವಿಜಯಪುರ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಹರಣಶಿಖಾರಿ ಕಾಲೋನಿಯಲ್ಲಿ ನಡೆದಿದೆ. ಹರಣಶಿಖಾರಿ ಕಾಲೊನಿಯ ಚಂಪು ರಾಜು ಚವ್ಹಾಣ (32), ಚಂದ್ರು ಶರಣಪ್ಪ ಚವ್ಹಾಣ (42) ಬಂಧಿತ ಆರೋಪಿಗಳು. ಬಂಧಿತರಿಂದ 5 ಕೆಜಿ ತೂಕದ 50 ಸಾವಿರ ರೂ. ಮೌಲ್ಯದ ಗಾಂಜಾ ಹಾಗೂ 2050 ನಗದು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಹರಣಶಿಖಾರಿ ಕಾಲೋನಿ ಹಾಗೂ ಜೆಎಂ ರಸ್ತೆಯಲ್ಲಿ ಬಹಿರಂಗವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಗೋಳಗುಮ್ಮಟ್ ಪೊಲೀಸರು ದಾಳಿಗೈದಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.