ವಿಜಯಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸೋನಕನಹಳ್ಳಿ ಬಳಿ ಗುರುವಾರ ನಡೆದಿದೆ. ಮುಕ್ತಿಯಾರ ಅಹ್ಮದ್ ಕೂಡ್ಲೆ, ಸದ್ದಾಂ ಮುಲ್ಲಾ ಬಂಧಿತ ಆರೋಪಿಗಳು. ಇನ್ನೂ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಬಂಧಿತರಿಂದ 5 ಲಕ್ಷ ಮೌಲ್ಯದ 70 ಕೆಜಿ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.