ವಿಜಯಪುರ: ಮೀಸಲಾತಿ ವಿಚಾರದಲ್ಲಿ
ಸರ್ಕಾರ ಚಾಕಲೇಟ್ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದರು.
ವಿಜಯಪುರ ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಬರೀ ಸುಳ್ಳು. ಚಾಕಲೇಟ್ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಡಿಚ್ಚಿ ನೀಡಿದರು. ಮೀಸಲಾತಿ ಯಾರು ಒಪ್ಪಲು ತಯಾರು ಇಲ್ಲ. ಸರ್ಕಾರ ತಪ್ಪು ದಾರಿ ಒಯ್ಯಲು ಕೆಲಸ ಮಾಡುತ್ತಿದೆ. ಕಾನೂನು ಪ್ರಕಾರ ಆ ರೀತಿ ಮಾಡಲು ಬರಲ್ಲ. ಪಂಚಮಸಾಲಿ, ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡ್ತಾರೆ ಸರ್ಕಾರ ಹೇಳಬೇಕು. ಮೀಸಲಾತಿಯನ್ನು ನಾವು ಒಪ್ಪಿಕೊಳ್ಳಲ್ಲ ಎಂದರು.