ವಿಜಯಪುರ: ಇಂದು ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆ, 17 ಸ್ಥಾನಗಳಲ್ಲಿ ಬಿಜೆಪಿ, 10 ಸ್ಥಾನಗಳಲ್ಲಿ ಕಾಂಗ್ರೆಸ್, 5 ಸ್ಥಾನಗಳಲ್ಲಿ ಪಕ್ಷೇತರರು, 2 ಸ್ಥಾನಗಳಲ್ಲಿ ಎಐಎಂಐಎಂ, 1 ಸ್ಥಾನದಲ್ಲಿ ಜೆಡಿಎಸ್ ಬಲ ಹೊಂದಿದ್ದು, ಬಿಜೆಪಿ ಕಾಂಗ್ರೆಸ್ ಮಧ್ಯೆ ಪಾಲಿಕೆ ಆಧಿಕಾರಕ್ಕಾಗಿ ಕಸರತ್ತು ನಡೆದಿದೆ. 5 ಪಕ್ಷೇತರರು 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯರ ಬೆಂಬಲ ಪಡೆದಿದೆ. ಜೊತೆಗೆ ಸಚಿವ ಎಂ ಬಿ ಪಾಟೀಲ್, ಶಾಸಕ ವಿಠಲ ಕಟಕದೊಂಡ, ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹಾಗೂ ಪ್ರಕಾಶ ರಾಠೋಡ್ ಮತಗಳ ಬೆಂಬಲದಿಂದ ಒಟ್ಟು 22 ಮತಗಳನ್ನ ಕಾಂಗ್ರೆಸ್ ಹೊಂದಿದೆ. ಬಿಜೆಪಿಯ 17 ಸದಸ್ಯರ ಪೈಕಿ ಓರ್ವ ಬಿಜೆಪಿ ಸದಸ್ಯ ಓರ್ವ ಸದಸ್ಯ ನಿಧನರಾಗಿದ್ದು, ಬಿಜೆಪಿ ಬಲಕ್ಕೆ ಕುಸಿದಿದೆ. 16 ಸದಸ್ಯರ ಜೊತೆಗೆ ನಗರ ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಮತ ಸೇರಿ ಒಟ್ಟು 18 ಮತಗಳು ಮಾತ್ರ ಬಿಜೆಪಿ ಕೈಯ್ಯಲ್ಲಿವೆ. ಸಾಮಾನ್ಯ ವರ್ಗಕ್ಕೆ ಮೇಯರ್ ಸ್ಥಾನ, ಉಪ ಮೇಯರ್ ಸ್ಥಾನ ಎಸ್ಟಿ ಪುರುಷ ಮೀಸಲಾಗಿದೆ. ಮೇಯರ ಸ್ಥಾನಕ್ಕೆ ವಾರ್ಡ್ ನಂಬರ್ 34 ರ ಕಾಂಗ್ರೆಸ್ ಸದಸ್ಯೆ ಮಾಹೇಜಬೀನ್ ಅಬ್ದುಲ್ ರಜಾಕ್ ಹೋರ್ತಿ, ಉಪ ಮೇಯರ ಸ್ಥಾನಕ್ಕೆ ವಾರ್ಡ್ ನಂಬರ್ 19 ರ ಸದಸ್ಯ ದಿನೇಶ್ ಹಳ್ಳಿ ಸ್ಪರ್ಧೆ ಮಾಡಲಿದ್ದಾರೆ. ಬಿಜೆಪಿಯಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಯಾರು ಸ್ಪರ್ದೆ ಮಾಡಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)