ವಿಜಯಪುರ: ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಸೈನಿಕ ಶಾಲೆ ಮೈದಾನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಪ್ತಮಾಣದ ಯೋಗಥಾನ್ ಯೋಗ ಪ್ರದರ್ಶನ ರವಿವಾರ ನಡೆಯಿತು.
25 ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಏಕಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದರು.
ಸೈನಿಕ ಶಾಲೆಯ ಮೈದಾನದಲ್ಲಿ ಒಟ್ಟು ಯೋಗಾಸನ ಮಾಡಲು ಒಟ್ಟು 9 ಬ್ಲಾಕ್ ಮಾಡಲಾಗಿತ್ತು. ಪ್ರತಿ ಬ್ಲಾಕ್ ನಲ್ಲಿ ಸುಮಾರು 2 ಸಾವಿರ ಯೋಗಪಟುಗಳು ತಮ್ಮ ಯೋಗ ಪ್ರರ್ದಶನ ತೋರಿಸಿದರು. ಯೋಗ ಪಟು ಬಸನಗೌಡ ಹೊರನಾಳ ನೇತ್ವತೃದಲ್ಲಿ ಈ ಯೋಗಾಶನದ ಯೋಗಥಾನ್ ಹಮ್ಕಿ ಕೊಳ್ಳ ಲಾಗಿತ್ತು. ಯೋಗಥಾನ್ ವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಯೋಗ ದೇಹದ ಆರೋಗ್ಯ ಕಾಪಾಡಲು ಪೂರಕವಾಗಿದೆ. ಹಿಂದಿನ ಕೇಂದ್ರದಲ್ಲಿದ್ದ ಸರ್ಕಾರಗಳು ಈ ಬಗ್ಗೆ ಚಿಂತಿಸಲಿಲ್ಲ, ಆದರೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ವಿಶ್ವ ಸಂಸ್ಥೆಯಲ್ಲಿ ಯೋಗ ದಿನಾಚರಣೆ ಕುರಿತು ಪ್ರಸ್ತಾವನೆ ಸಲ್ಲಿಸಿ, ಈಗ ಇಡಿ ಜಗತ್ರು ಯೋಗದಿನ ಆಚರಣೆ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.