ವಿಜಯಪುರ: ಬೃಹತ್ ಮೊಬೈಲ್ ಟವರ್ ಮೇಲೇರಿ ಯುವಕನ ಅರೆಬೆತ್ತಲೆ ಹುಚ್ಚಾಟ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಇಂಡಿ ತಾಲ್ಲೂಕಿನ ತೆಗ್ಗೆಹಳ್ಳಿ ಗ್ರಾಮದ ಸತೀಶ್ ಟವರ್ ಏರಿದ ಯುವಕ. ಯುವಕ ಟವರ್ ಮೇಲೆ ಗಂಟೆಗಟ್ಟಲೇ ಚಿತ್ರ ವಿಚಿತ್ರವಾಗಿ ವರ್ತಿಸಿದ್ದಾನೆ.ಈ ಯುವಕ ಇತ್ತೀಚೆಗೆ ಸಿಂದಗಿ ತಾಲ್ಲೂಕಿನ ಬಳಗಾನೂರ, ಚಾಂದಕವಟೆ ಗ್ರಾಮದಲ್ಲಿ ಟವರ್ ಮೇಲೇರಿ ಆತಂಕ ಸೃಷ್ಟಿಸಿದ್ದನು. ಇದೀಗ್ ಗುಟ್ಕಾ ಚೀಟ ತೋರಿಸಿ ಯುವಕನನ್ನು ಸ್ಥಳೀಯರು ಕೆಳಗಿಳಿಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.