ವಿಜಯಪುರ: ಆನ್ಲೈನ್ ಮೂಲಕ ಲಕ್ಷಾಂತರ ನಗದು ವಂಚನೆಗೈದಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುಳಾ ಕೆ.ಆರ್, ಈಕೆಯ ಗಂಡ ಸ್ವಾಮಿ ಬಸವರಾಜುನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಆನ್ಲೈನ್ ಮೂಲಕ 40 ಲಕ್ಷ ಹಣ ವಂಚನೆ ಮಾಡಲಾಗಿದೆ. ಅಲ್ಲದೇ, ದೂರುದಾರರಾದ ಪರಮೇಶ್ವರ ಹಿಪ್ಪರಗಿಯ ಸ್ನಾ ಮಾಡುವ ಖಾಸಗಿ ಫೋಟೊ ಬಳಿಸಿಕೊಂಡು ಹನಿಟ್ರ್ಯಾಪ್ ಕೂಡ ಮಾಡಲಾಗಿದೆ. ಅದಕ್ಕಾಗಿ 40 ಲಕ್ಷ ಹಣದಲ್ಲಿ 4.64 ನಗದು, ಮೊಬೈಲ್, ಕಾರು ಸೇರಿದಂತೆ 6.64 ಮೌಲ್ಯದ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಇನ್ನೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮತ್ತೊಂದೆಡೆ ಆನ್ಲೈನ್ ಮೂಲಕ ಕಳೆದ ಮೂರು ತಿಂಗಳಲ್ಲಿ 27 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಭೇದಿಸಲಾಗಿದೆ. 27 ಕೇಸ್ಗಳಲ್ಲಿ 40.91 ಲಕ್ಷ ವಂಚನೆ ಮಾಡಲಾಗಿತ್ತು. ಇದರಲ್ಲಿ 32.32 ಲಕ್ಷ ನಗದನ್ನು ನೊಂದ ದೂರುದಾರರಿಗೆ ನೀಡಲಾಗಿದೆ. ಅದಕ್ಕಾಗಿ ಸಾರ್ವಜನಿಕರು ಆನ್ಲೈನ್ ಮೂಲಕ ವಂಚನೆ ಆಗದಂತೆ ನೋಡಿಕೊಳ್ಳಬೇಕು. ಆನ್ಲೈನ್ ಮೂಲಕ ಓಟಿಪಿ, ಮಾಹಿತಿ ಸೇರಿದಂತೆ ಯಾವುದೇ ಮಾಹಿತಿಯನ್ನು ಬೇರೆಯವರಿಗೆ ನೀಡಬಾರದು ಎಂದು ಮನವಿ ಮಾಡಿದರು.