ರಾಜ್ಯ ಸರ್ಕಾರದ ಮುಡಾಹಗರಣ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ನಡಸಿರುವ ಮೈಸುರು ಚಲೋ ಪಾದ ಯಾತ್ರೆ ಇಂದು 3 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಚನ್ನ ಪಟ್ಟಣದಿಂದ ಪ್ರಾರಂಭವಾಗಿದೆ, ಈ ವೇಳೆ ಕೇಂದ್ರ ಸಚಿವರಾದ ಎಚ್ ಡಿ ಕುಮಾರಾಸ್ವಾಮಿ ಯವರು ಭಾಗಿಯಾಗಿ ಸುಮಾರು 3 ಕಿ,ಮಿ ನಡೆಯುವ ಮೂಲಕ ಪಾದ ಮಾಡಿದರು.
ಈ ವೇಳೆ ಯುವ ಜನತಾದಳ ರಾಜ್ಯಾಧ್ಯಕ್ಷ ನೀಖಿಲ್ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ಬಿ ವೈ ವಿಜಯಂದ್ರ , ಪ್ರತಿಪಕ್ಷ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ , ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಸುರೇಶ್ ಬಾಬು ಸೇರಿದಂತೆ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಉಪಸ್ಥಿತ್ತರಿದ್ದರು.