ವಿಜಯಪುರ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೀನುಗಾರರು ರಕ್ಷಿಸಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ಸಂಭವಿಸಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗೌರ. ಬಿ ಗ್ರಾಮದ ಕಲ್ಲಪ್ಪ ಸಂಗಪ್ಪ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಕೌಟುಂಬಿಕ ಕಲಹದಿಂದ ಮನನೊಂದು ಸೇತುವೆ ಮೇಲೆ ಕೃಷ್ಣಾ ನದಿಗೆ ಹಾರಲು ಯತ್ನಿಸಿದಾಗ ಮೀನುಗಾರರು ರಕ್ಷಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಪಿಎಸ್ಐ ಪ್ರೀತಮ್ ನಾಯಕ ಭೇಟಿ ನೀಡಿದರು. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.