ವಿಜಯಪುರ: ಪಿಕನಿಕ್ ಗೆ ಹೊರಟಿದ್ದ ಟೆಂಪೊ ಟ್ರಾವೆಲ್ಸ್ ಪಲ್ಟಿಯಾಗಿ ಓರ್ವ ಅಸುನೀಗಿರುವ ಘಟನೆ
ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ಕೂಚಬಾಳ-ಬಾವೂರ ಮಧ್ಯದಲ್ಲಿ ನಡೆದಿದೆ.
ಸರ್ಕಾರಿ ಶಾಲಾ ಮಕ್ಕಳನ್ಮು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಟ್ರಾವೆಲ್ಸ್ ಪಲ್ಟಿಯಾಗಿದ್ದು,
ಘಟನೆಯಲ್ಲಿ ಟ್ರಾವೆಲ್ಸ್ ಕ್ಲೀನರ್ ದಾವಲಸಾಬ ಸಾಲವಾಡಗಿ ಸಾವನ್ನಪ್ಪಿದ್ದಾನೆ. ಅಲ್ಲದೇ, ಘಟನೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಆಲಮಟ್ಟಿಗೆ ಪಿಕ್ನಿಕ್ಗೆ ಹೋಗುತ್ತಿದ್ದರು. ಅಲ್ಲದೇ, ಗಾಯಾಳು ವಿದ್ಯಾರ್ಥಿಗಳಿಗೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ
ತಾಳಿಕೊಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.