ವಿಜಯಪುರ: ಜಿಲ್ಲೆಯ ನಾಲತವಾಡ ಪಟ್ಟಣದ ಕೇಸಾಪೂರ ಗ್ರಾಮದ ಸಿದ್ಧಾರ್ಥ ಪಬ್ಲಿಕ್ ಶಿಕ್ಷಣ ಸಂಸ್ಥೆಯ ವತಿಯಿಂದ ಸಿದ್ಧಾರ್ಥ ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮುದ್ದೇಬಿಹಾಳದ ಗುರುಬಸವ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಬಸವರಾಜ ಬಿರಾದಾರ ಹಾಗೂ ಎಸ್.ಎ.ಬಿರಾದಾರ ನೇತೃತ್ವದಲ್ಲಿ ಶಾಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು. ಜತೆಗೆ ಔಷಧಗಳನ್ನು ವಿತರಿಸಲಾಯಿತು. ಕೆಲ ಬಡ ಮಹಿಳೆಯರ,ಶಿಕ್ಷಕರ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು.ಹಿತ ಮಿತವಾದ ಹಾಗೂ ಗುಣಮಟ್ಟದ ಆಹಾರ ಸೇವಿಸುವುದು,ಕರಿದ ಕುರುಕಲು ತಿಂಡಿಗಳನ್ನು ತಿನ್ನಬೇಡಿರೆಂದು ವೈದ್ಯರು ಮಕ್ಕಳಿಗೆ ಸಲಹೆ ನೀಡಿದರು. ಗ್ರಾಮೀಣ ಪ್ರದೇಶದ ಮಕ್ಕಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಶುಚಿತ್ವ, ಆರೋಗ್ಯದ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ಶಿಕ್ಷಕರು ಶ್ರಮಿಸಬೇಕು’ ಎಂದು ಸಂಸ್ಥೆಯ ಅಧ್ಯಕ್ಷರಾದ ಸರಸ್ವತಿ ರಾಮಣ್ಣ ಖಾನಾಪೂರ ಸಲಹೆ ನೀಡಿದರು. ಕಾರ್ಯದರ್ಶಿ ರಾಮಣ್ಣ ಖಾನಾಪೂರ,ಪ್ರಾಂಶುಪಾಲರಾದ ಜಗದೀಶ್,ಉಪ ಪ್ರಾಂಶುಪಾಲ ವಿಶಾಲ್,ಶಿಕ್ಷಕರು,ಪಾಲಕರು ಉಪಸ್ಥಿತರಿದ್ದರು.