ವಿಜಯಪುರ: ನಡೆದಾಡುವ ದೇವರು ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದ ಶಿವರಾಯ್ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಡೆದಾಡುವ ದೇವರು ಶ್ರೀಗಳು ಬಗ್ಗೆ ಆಲಿಸಿ ಗ್ರಾಮಸ್ಥರು ಪುಣಿತರಾದರು. ಈ ವೇಳೆ ಮುಳವಾಡ ಜನತೆ ದೀಪ ಬೆಳಗಿಸುವ ಮೂಲಕ ಶ್ರೀಗಳಿಗೆ ನಮನ ಸಲ್ಲಿಸಿದರು. ಅಲ್ಲದೇ, ಸಂದರ್ಭದಲ್ಲಿ ಪ್ರಭು ಸ್ವಾಮಿ, ಗಣ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.