ವಿಜಯಪುರ: ಕಾರಿನ ಬ್ರೇಕ್ ಫೇಲ್ ಆಗಿರುವ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಇಳಿಜಾರಿಗೆ ಕಾರು ಬಿದ್ದಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. HP 38 G 2143 ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಾಳು ಆಗಿವೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಾರನ್ನು ಜೆಸಿಬಿ ಮೂಲಕ ಹೊರಗಡೆಗೆ ತೆಗೆಯಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.