ವಿಜಯಪುರ: ಅಕ್ರಮವಾಗಿ ಡಾಬಾದಲ್ಲಿ ಮದ್ಯ ಮಾರಾಟ ಮಾಡುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿವಿಧ ಬ್ರ್ಯಾಂಡಿನ 203 ಬಿಯರ್ ಬಾಟಲ್ ಹಾಗೂ ವಿವಿಧ ಬ್ರ್ಯಾಂಡಿನ 740 ಮದ್ಯದ ಬಾಟಲ್ ಜಪ್ತಿಗೈದಿದ್ದಾರೆ. ಸಿಇಎನ್ ಕ್ರೈಂ ಪಿಎಸ್ಐ ಸಂಜೀವ ಕಾಂಬ್ಳೆ ನೇತೃತ್ವದಲ್ಲಿ ವಿಜಯಪುರ ನಗರದ ಹಾಗೂ ಆಲಮಟ್ಟಿಯ ಡಾಬಾದಲ್ಲಿ ದಾಳಿ ಮಾಡಲಾಗಿದೆ. ದಾಳಿಯಲ್ಲಿ ಸಾವಿರಾರು ಮೌಲ್ಯದ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.