K1N ಡೆಸ್ಕ್: ಡಿಡಿಎಲ್ಜಿ ಸಿನೆಮಾ ಖ್ಯಾತಿಯ ನಟಿ ಕಾಜೋಲ್ ಸದ್ಯ ಸಲಾಮ್ ವೆಂಕಿ ಪ್ರಮೋಷನ್ ನಲ್ಲಿ ಬಿಜಿ ಆಗಿದ್ದಾರೆ. ಅಲ್ಲದೇ, ಸಿಂಗ್ಂ ಖ್ಯಾತಿಯ ಅಜಯ್ ದೇವಗನ್ ಮಗಳು ನಿಸಾ ದೇವಗನ್ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿವೆ. ನಿಸಾ ಇನ್ನೂ ಬಾಲಿವುಡ್ಗೆ ಕಾಲಿಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಸ್ಟಾರ್ ಮಕ್ಕಳು ಅಂದ್ಮೇಲೆ ಫ್ಯಾನ್ಸ್, ಏನ್ ಕಮ್ಮಿ ಇರಲ್ಲ. ನಿಸಾ ತಮ್ಮ ಬೋಲ್ಡ್ ಲುಕ್ಗಳಿಂದ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.