ವಿಜಯಪುರ: ವಿಧಾನ ಪರಿಷತ್ ಚುನಾವಣೆಯ ವಾಯವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಿಂದ ಅನುಕ್ರಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಸುನೀಲ ಸಂಖ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ಹೇಳಿದರು.
ಕಾಂಗ್ರೆಸ್ ಸಾಕಷ್ಟು ಅಧ್ಯಯನ ಮಾಡಿ ಅಳೆದು ತೂಗಿ ಒಮ್ಮತದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಒಲವು ಇದ್ದು ಈ ಬಾರಿ ಗೆಲುವು ನಿಶ್ಚಿತ ಎಂದರು.
ಕಾಂಗ್ರೆಸ್ ನ ಎಲ್ಲ ಹಿರಿಯರು ಒಮ್ಮತದಿಂದ ಪ್ರಕಾಶ ಹುಕ್ಕೇರಿ ಹಾಗೂ ಸುನೀಲ ಸಂಖ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.
ಪ್ರಕಾಶ ಹುಕ್ಕೇರಿ ಗ್ರಾಮೀಣ ಮಟ್ಟದಿಂದ ಸೇವೆ ಸಲ್ಲಿಸಿದವರು. ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಮತದಾರರಿಗೆ ಹಗಲು ರಾತ್ರಿ ಶ್ರಮ ಪಟ್ಟು ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಬೆಳಗಾವಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಒದಗಿಸಲು ಶ್ರಮಿಸಿದ್ದಾರೆ. ಚಿಕ್ಕೋಡಿಯಲ್ಲೂ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅದೇ ರೀತಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಥಣಿ ಭಾಗದ ಸುನೀಲ ಸಂಖ ಸಹ ಪದವೀಧರರ ಸಮಸ್ಯೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ನಿರುದ್ಯೋಗಿ ಯುವಕರ ಸಮಸ್ಯೆಗೆ ಸಂಖ ಸ್ಪಂದಿಸಿದ್ದಾರೆ.2015 ರಿಂದ ಅಬುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಆಗಿಲ್ಲ. ಶೇ.38 ರಷ್ಟು ಹುದ್ದೆಗಳು ಖಾಲಿ ಇವೆ. ಉದ್ಯೋಗವಕಾಶ ಇಲ್ಲದೇ ಯುವಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಕರೊನಾ ಸಂದರ್ಭದಲ್ಲಿ, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ನಿರುದ್ಯೋಗಿಗಳು ಸಾಕಷ್ಟು ತೊಂದರೆಗೆ ಸಿಲುಕಿದರು. ಅತಿಥಿ ಉಪನ್ಯಾಸಕರ ಸಮಸ್ಯೆಯೂ ಹೇಳತೀರದು. ಕೇವಲ 10-15 ಸಾವಿರ ರೂ.ಸಂಭಾವನೆ ನೀಡಲಾಗುತ್ತಿತ್ತು. ದಿನಗೂಲಿ ನೌಕರರು ಸಹ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಬೈಫರ್ ಕೇಟೆಡ್ ಪಿಯು ಕಾಲೇಜಗಳಲ್ಲಿ ಶಿಕ್ಷಕರು ಇಲ್ಲ. ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಸೇವೆ ನಿರತರು ನಿಧನರಾದರೆ ಅನುಕಂಪ ಆಧಾರಿತ ನೌಕರಿ ಸ್ಥಗಿತಗೊಳಿಸಲಾಗಿದೆ ಎಂದರು.
ಅನುದಾನಿತ ಕಾಲೇಜ್ ಗಳಲ್ಲಿ ಶಾಶ್ವತ ಪ್ರಾಂಶುಪಾಲರ ಹುದ್ದೆಗೆ ನೇಮಕ ಆಗಿಲ್ಲ. ಹಳೇ ಮೈಸೂರು ಭಾಗದಲ್ಲಿ ಮಹಾರಾಜರು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು.ಆ ರೀತಿ
ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಆಗಲಿಲ್ಲ. ಇದೀಗ ಇರುವ ಶಿಕ್ಷಣ ಸಂಸ್ಥೆಗಳನ್ನು ಅಂದರೆ 15 ವರ್ಷಗಳಿಂದ ಅನುದಾನಕ್ಕೆ ಒಳಪಡಿಸಲಾಗುತ್ತಿಲ್ಲ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಮುಂಬೈ ಕರ್ನಾಟಕ ಭಾಗದಲ್ಲಿ
ಶೇ. 80 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುದಾನ ಕ್ಕೆ ಒಳಪಟ್ಟಿಲ್ಲ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ರ ನೇಮಕ ಆಗುತ್ತಿಲ್ಲ. ಅತಿಥಿ ಉಪನ್ಯಾಸಕರ ವೇತನಕ್ಕೆ ಭರವಸೆ ಇಲ್ಲ. ಇನ್ನು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಅವರ ಸೇವೆ, ವೇತನ ರಕ್ಷಣೆ ಇಲ್ಲ. ಹೀಗೆ ಅನೇಕ ಸಮಸ್ಯೆಗಳಿವೆ. ಈ ಎಲ್ಲ ಕಾರಣಗಳಿಂದಾಗಿ
ಮುಂಬೈ ಕರ್ನಾಟಕದ ಶಿಕ್ಷಕರ ಹಾಗೂ ಪದವಿಧರ ಕ್ಷೇತ್ರದ ಚುನಾವಣೆ ಸಾಕಷ್ಟು ಮಹತ್ವ ಪಡೆದಿದೆ ಎಂದರು.
ಕಾಂಗ್ರೆಸ್ ಸಾಕಷ್ಟು ಅಧ್ಯನ ಮಾಡಿ ಪ್ರಕಾಶ ಹುಕ್ಕೇರಿ ಹಾಗೂ ಸುನೀಲ ಸಂಖ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಪ್ರಕಾಶ ಹುಕ್ಕೆ ಹಿಡಿದ ಕೆಲಸ ಬಿಡುವಂಥವರಲ್ಲ. ಶಿಕ್ಷಕರ ಸಮಸ್ಯೆಗೆ ಖಂಡಿತ ಸ್ಪಂದಿಸಲಿದ್ದಾರೆ. ಅವರ ಗೆಲುವು ನಿಶ್ಚಿತ ಎಂದರು.
ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತನಾಡಿ, ಎರಡು ಬಾರಿ ಆಯ್ಕೆಯಾದ
ಅರುಣ ಶಹಾಪುರ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿಲ್ಲ. ಇದನ್ನರಿತು ಎಲ್ಲ ಶಿಕ್ಷಕರು ಹಾಗೂ ಪ್ರಮುಖ ರ ಮನದಾಳ ಅರಿತು ರಾಜ್ಯ ನಾಯಕರಾದ ಡಿಕೆಶಿ, ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲರ ಒತ್ತಾಸೆ ಮೇರೆಗೆ ಕಣಕ್ಕಿಳಿದಿರುವೆ ಎಂದರು.
ಬಿಜೆಪಿಯ ಲೋಕಸಭಾ ಸದಸ್ಯರೇ ಅರುಣ ಶಹಾಪುರ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಇದು ಅರುಣ ಶಹಾಪುರ ಕಾರ್ಯ ವೈಖರಿ ಸಾದರಪಡಿಸುತ್ತದೆ ಎಂದರು.