ವಿಜಯಪುರ: ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ, 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಇಂಡಿ ತಾಲೂಕಿನ ಕೆ.ಡಿ. ಗ್ರಾಮದ ಅಮೃತ ಭೀಮಶ್ಯಾ ಮುಚ್ಚಂಡಿ ಶಿಕ್ಷೆಗೆ ಗುರಿಯಾದವ. ಗಂಡನಿಂದಲೇ ಹತ್ಯೆಯಾದ ದುರ್ದೈವಿ ಮಹಿಳೆ ಲಕ್ಷ್ಮೀ. ಮದ್ಯ ವ್ಯಸನಿಯಾಗಿದ್ದ ಅಮೃತ ತನ್ನ ಪತ್ನಿ ಲಕ್ಷ್ಮೀ ಶೀಲದ ಬಗ್ಗೆ ಸಂಶಯ ಹೊಂದಿದ್ದ. 2015 ಸೆಪ್ಟೆಂಬರ್ 19 ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಅಮೃತ, ಪತ್ನಿಯೊಂದಿಗೆ ಜಗಳ ತೆಗೆದು, ಹಲ್ಲೆ ನಡೆಸಿ ಮಲಗಿದ್ದ ಪತ್ನಿ ಲಕ್ಷ್ಮೀ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆ ಬೆಂಕಿ ಹಚ್ಚಿದ್ದನು. ಇನ್ನು ವಿಚಾರಣೆ ನಡೆಸಿದ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಧ್ವೇಶ ದಬೇರ ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ 4ನೇ ಅಧಿಕ ಸರ್ಕಾರಿ ಅಭಿಯೋಜಕ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.