ಆ್ಯಂಕರ್: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಪತ್ನಿ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ಪತಿ ಬೀರಪ್ಪ ಮಾಯಪ್ಪ ಪೂಜಾರಿ (36) ಎಂಬುವರನ್ನು ಕೊಲ್ಲಲು ಯತ್ನಿಸಿದ ಪತ್ನಿ ಸುನಂದಾ. ಇನ್ನಿ ಸೆಪ್ಟೆಂಬರ್ 1ರಂದು ರಾತ್ರಿ ಮಲಗಿದಾಗ ಪತಿಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾಳೆ. ಬೀರಪ್ಪನ ಪತ್ನಿ ಸುನಂದಾ, ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹೆಂಡತಿಯಿಂದ ಗಂಡನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ. ಪತಿ ಮಲಗಿದ್ದಾಗ ಪ್ರಿಯಕರನ ಜೊತೆಗೆ ಮತ್ತೊಬ್ಬನನ್ನು ಕರೆಯಿಸಿ
ಬೀರಪ್ಪನ ಎದೆಮೇಲೆ ಕುಳಿತು ಕತ್ತು, ಹಾಗೂ ಮರ್ಮಾಂಗ ಹಿಸುಕಿ ಕೊಲೆಗೆ ಯತ್ನಿಸಿದ್ದಾಳೆ. ಸಿದ್ದು ಬಿಡಬೇಡಾ ಖಲಾಸ್ ಮಾಡು ಎಂದು ಪತ್ನಿ ಸುನಂದಾ ಎನ್ನುತ್ತಿದ್ದಳು ಎಂದು ಗಂಡು ಆರೋಪಿಸಿದ್ದಾನೆ. ಇನ್ನು ಕತ್ತು ಹಿಸುಕುವಾಗ ಕಾಲಿನಿಂದ ಕೂಲರ್ ಒದ್ದು ಬೀರಪ್ಪ ಶಬ್ಧ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮನೆ ಮಾಲೀಕರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಕೊಲೆಯತ್ನ ವಿಫಲವಾಗಿದೆ. ಈ ವೇಳೆ ಬಾಗಿಲು ಬಡಿದಾಗ ಎಂಟು ವರ್ಷದ ಮಗ ಎಚ್ಚರಗೊಂಡು ಬಾಗಿಲು ತೆರೆದಿದ್ದಾನೆ. ಈ ವೇಳೆ ಮನೆಯಿಂದ ಪ್ರಿಯಕರ ಪರಾರಿಯಾಗಿದ್ದಾನೆ. ಗಾಯಗೊಂಡ ಪತಿಗೆ ಇಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಸುನಂದಾ ಪೂಜಾರಿನ್ನು ಇಂಡಿ ಪೋಲಿಸರು. ಬಂಧಿಸಿದ್ದಾರೆ. ಪರಾರಿಯಾದ ಪ್ರಿಯಕರನಿಗಾಗಿ ಪೊಲೀಸರ ಶೋಧಕಾರ್ಯ ನಡೆದಿದೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪತಿ, ಪತ್ನಿ ಮತ್ತು ಅವನು ! ಅವನಿಗಾಗಿ ಪತಿಗೆ ಸೆಚ್ಕ್.. ಜಸ್ಟ್ ಮಿಸ್..!
