ವಿಜಯಪುರ: ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಸಚಿವ ಉಮೇಶ ಕತ್ತಿ ಹೊಸ ಬಾಂಬ್ ಹಾಕಿದರು.
ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಲೂ ಹೇಳ್ತೀನಿ ನಾನು ಸಿಎಂ ಆಕಾಂಕ್ಷಿ ಆಗಿದ್ದೇನೆ. ಇನ್ನೂ ನಸೀಬು ಇದ್ರೆ ನಾಳೆ ಸಿಎಂ ಆಗಬಹುದು. 15 ವರ್ಷ ಆದ್ಮೇಲೆ ಸಿಎಂ ಸೀಟ್ ಬರಬಹುದು. ಆದ್ರೇ, ಸಿಎಂ ಬೊಮ್ಮಾಯಿನಾ ತೆಗೆದು ನಾನು ಆಕಾಂಕ್ಷಿ ಅಲ್ಲ ಎಂದರು.