ವಿಜಯಪುರ: ಭೀಮಾತೀರದ ಬೆನಕನಹಳ್ಳಿ ಗ್ರಾಮದ ಹರಳಯ್ಯನಟ್ಟಿಯ ಸದ್ಯ ಬೆಂಗಳೂರಿನಲ್ಲಿ ಸಿಪಿಐಯಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿರ್ಲಿಂಗ ಚಂ ಹೊನಕಟ್ಟಿಯವರ ರಚಿಸಿದ ‘ಗೋವು ಉಳಿದರೆ ನಾವು ಉಳಿದೆವು’ ಎನ್ನುವ ಸುಂದರವಾದ ಗ್ರಂಥವನ್ನು ಬರೆದು ಅದರ ದ್ವಿತೀಯ ಮರು ಮುದ್ರಣದ ಬಿಡುಗಡೆ ನಾಳೆ ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ.
ವಿಜಯಪುರದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜೀಯವರು ವಿಜಯಪುರದ ಧ್ಯಾನ ಯೋಗಾಶ್ರಮದಲ್ಲಿ ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಲಿದ್ದು, ಅಪ್ಪ – ಅವ್ವ ಕಲಾ, ಸಾಹಿತ್ಯ ಮತ್ತು ಸಂಸ್ಕೃತಿ ಸಂಸ್ಥೆ (ರಿ)ಯ (ಬೆನಕನಹಳ್ಳಿ ಹರಳಯ್ಯನಟ್ಟಿ) ಇಂಡಿಯ ಅಧ್ಯಕ್ಷರಾದ ವಿಶ್ವನಾಥ ಹೋನಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.