ವಿಜಯಪುರ: ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ನಡೆದಿದೆ.
ಅಮಸಿದ್ಧ ಭೀರಪ್ಪ ಧರಗೋಡ ಬಂಧಿತ ಆರೋಪಿ. ಇನ್ನು ಆರೋಪಿ ಇಟ್ಟಂಗಿಹಾಳ ಗ್ರಾಮದ ಸರ್ವೇಯಲ್ಲಿರುವ ದೇವುಬಾ ಮಾನ್ವರ ಜಮೀನಿನಲ್ಲಿ ಅಕ್ರಮವಾಗಿ 35 ಹಸಿ ಗಾಂಜಾ ಬೆಳೆದಿದ್ದು, ಒಟ್ಟು 15, 900 ಮೌಲ್ಯದ 2 ಕೆಜಿ 650 ಗ್ರಾಂ ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.