ವಿಜಯಪುರ: ಅಕ್ರಮವಾಗಿ ಮದ್ಯ ಸಾಗಾಟ ವೇಳೆ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ಕೆಇಬಿ ಬಳಿ ಸೋಮವಾರ ನಡೆದಿದೆ. ವಿವಿಧ ಮದ್ಯದ ಬಾಟಲಗಳಾದ 38 ಸಾವಿರ ಮೌಲ್ಯದ 95 ಲೀಟರ್ ಮದ್ಯ, ಒಂದು ಕಾರು ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೇ, ಇನ್ಸ್ಪೆಕ್ಟರ್ ಸಂಜೀವ ಕಾಂಬ್ಳೆ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.