ವಿಜಯಪುರ : ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮ ಸಾಗಣೆ ಪತ್ತೆ ಹಚ್ಚಿರುವ ಗಾಂಧಿವೃತ್ತ ಠಾಣೆ ಪೊಲಿಸರು, 8,910 ಕೆಜಿ ತೂಕದ 226 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಮದಿನಾನಗರ ನಿವಾಸಿ ರಿಯಾಜ್ ಗೌಸಮೋದ್ದೀನ್ ನದಾ ಆರೋಪಿ. ಈತ ಮಿನಿ ಗೂಡ್ಸ್ ಅಶೋಕ ಲೇಲೆಂಡ್ನಲ್ಲಿ 226 ಪ್ಲಾಸ್ಟಿಕ್ ಚೀಲಗಳಲ್ಲಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು, ಲಾರಿ ಸಮೇತ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈತ ಕಡಿಮೆ ಬೆಲೆಗೆ ಪಡಿತರ ಅಕ್ಕಿ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದ ವೇಳೆ ಇಂಡಿ ರಸ್ತೆಯಲ್ಲಿರುವ ಹಿಪ್ಪರಗಿಯವರ ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಅನೀಲ ಚೌಹಾಣ್ ನೀಡಿದ ದೂರಿನನ್ವಯ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.