ವಿಜಯಪುರ: ಗ್ಯಾಸ್ ರೀಫಲಿಂಗ್‌ಗಾಗಿ ಅಕ್ರಮವಾಗಿ ಸಂಗ್ರಹಿಸಿದ ಗ್ಯಾಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಡಣದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ನಡೆದಿದೆ.
ಅಮೀನ್ ಮುಲ್ಲಾ (27) ಬಂಧಿತ ಆರೋಪಿ. ಇನ್ನು ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಚಿಕ್ಕ ಚಿಕ್ಕ ಗ್ಯಾಸ್‌ಗಳಿಗೆ ರೀಫಲಿಂಗ್ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಆಹಾರ ನೀರಿಕ್ಷಕ ಅಧಿಕಾರಿಗಳು ದಾಳಿಗೈದು 62,100 ಮೌಲ್ಯದ 45 ಸಿಲಿಂಡರ್ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.