ಬೆಂಗಳೂರು: IPhoneನೊಂದಿಗೆ ಅಮೆರಿಕ ಸೇರಿದಂತೆ ಹಲವು ಬ್ರ್ಯಾಂಡ್ ಕಂಪನಿಗಳು ಕರ್ನಾಟಕದಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪನೆ ಮಾಡುತ್ತಿವೆ. ಆ್ಯಪ್ಲ್ ಪಾಲುದಾರ ಕಂಪನಿಯ ಫಾಕ್ಸ್ಕಾನ್ ಹೂಡಿಕೆಯಿಂದಾಗಿ ರಾಜ್ಯದಲ್ಲಿ 1 ಲಕ್ಷ ನೇರ ಹಾಗೂ ಪರ್ಯಾಯ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.