ವಿಜಯಪುರ: ರಾಜ್ಯದಲ್ಲಿ ನೀರಾವರಿ ಯೋಜನೆಯಲ್ಲಿ ಡೊಂಬರಾಟ ನಡೆಯುತ್ತಿದೆ ಎಂದು ಮಾಜಿ ಸಚಿವ ಸಿ ಎಸ್ ನಾಡಗೌಡ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯಾಗಿರುವ ನೀರಾವರಿ ಯೋಜನೆ ಶಾಸಕ ಎಂಬಿ ಪಾಟೀಲ್, ಮಾಜಿ ಸಿದ್ದರಾಮಯ್ಯ ಅವರ ಕೊಡುಗೆ ಆಗಿದೆ. ಆದ್ರೇ, ಸಿಎಂ ಬಸವರಾಜ್ ಬೊಮ್ಮಾಯಿ ಅಭಿವೃದ್ಧಿ ಮಾಡಿಲ್ಲ. ಇದು ಸತ್ಯಕ್ಕೆ ದೂರ ಆಗಿದೆ ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿ ತಾಳಿಕೋಟೆಯಲ್ಲಿ ನೀರಾವರಿ ಯೋಜನೆ ಜಾರಿಗೆ ಆಗಿದೆ. ಆ ಅವಧಿಯಲ್ಲಿ ಶಾಸಕ ಸಾಸನೂರ ಶಾಸಕರು ಆಗಿಲ್ಲ ಎಂದು ಟಾಂಗ್ ನೀಡಿದರು.
ಅಲ್ಲದೇ, ಇದೇ ವೇಳೆಯಲ್ಲಿ ಕೈ ಮುಖಂಡ ಸುಭಾಷ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಹೊಸ ಯೋಜನೆಗಳು ಜಾರಿಗೆ ಆಗಿಲ್ಲ ಎಂದರು. ಗುತ್ತಿ ಬಸವಣ್ಣ ಏತ ನೀರಾವರಿಯ ಎಂಟು ಮೋಟರ್ ಸುಟ್ಟು ಹೋಗಿದೆ. ಅದಕ್ಕಾಗಿ ನೀರು ಬರುತ್ತಿಲ್ಲ. ಇದರಿಂದ ರೈತರ ಬದುಕು ತತ್ತರಿಸಿದೆ. ಸರ್ಕಾರ 40% ಸರ್ಕಾರ ಆಗಿದೆ. ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ ಎಂದು ಕಿಡಿಕಾರಿದರು. ಅದಕ್ಕಾಗಿ ಇನ್ನಾದ್ರೂ ಸರ್ಕಾರ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.