ವಿಜಯಪುರ: ಬಣ್ಣಗಳ ಹಬ್ಬ ಹೋಳಿಯನ್ನು ವಿಜಯಪುರ ನಗರಾದ್ಯಂತ ಬುಧವಾರ ಆಚರಿಸಲಾಯಿತು. ವಿಜಯಪುರ ನಗರದ ಗಾಂಧಿಚೌಕ್ ಸೇರಿದಂತೆ ವಿವಿಧ ಕಾಲೋನಿಯಲ್ಲಿ ಪುಟ್ಟ ಮಕ್ಕಳು ಬಣ್ಣ ಎರಚಿ ಸಂಭ್ರಮಿಸಿದರು. ನಗರದ ಹೊರವಲಯದಲ್ಲಿ ಡಿಜೆ ಸಂಗೀತದ ಅಬ್ಬರದ ಜತೆಗೆ ಬಣ್ಣದೋಕುಳಿಯು ಹಬ್ಬವನ್ನು ರಂಗೇರಿವಂತೆ ಮಾಡಿತ್ತು. ಅಲ್ಲದೇ, ನಾಯಕರುಗಳು ಹಿಂದೂ ಮುಸ್ಲಿಂ ಭೇದಭಾವ ಮಾಡದೇ ಬಣ್ಣದ ಹಬ್ಬ ಆಚರಣೆ ಮಾಡಿದರು. ಬಣ್ಣ ಎರಚಿ ಸಂಭ್ರಮಿಸುವ ವೇಳೆ ಅಹಿತಕರ ಘಟನೆಗಳು ಆಗದಂತೆ ನಗರದಾದ್ಯಂತ ಜಿಲ್ಲಾ ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.