ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಆಪ್ತ ಪ್ರಶಾಂತ ಕೆಕರೆ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಮಾಡಿದೆ. ಧಾರವಾಡದ ಸಪ್ತಾಪುರ ಕೃಷಿ ಪಾರ್ಕ್ನಲ್ಲಿ ಪ್ರಶಾಂತ ಅವರ ಮನೆ ಇದ್ದು, ಆ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅರ್ಧ ಗಂಟೆಯಿಂದಲೂ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ವಿನಯ್ ಕುಲಕರ್ಣಿಗೆ ಮತ್ತೆ ಶಾಕ್ ನೀಡಲಾಗಿದ್ದು, ಪ್ರಶಾಂತ ಕೆಕರೆ ಚುನಾವಣೆ ವೇಳೆ ಇದು ಸಹಜ ಎನ್ನುತ್ತಲೇ ಐಟಿ ಅಧಿಕಾರಿಗಳಿಗೆ ಮನೆಯ ಕೀ ನೀಡಿ ಅವರನ್ನು ಒಳಗಡೆ ಕರೆದುಕೊಂಡು ಹೋಗಿದ್ದಾರೆ.